
ಚಿರಂಜೀವಿ ನಟನೆಯ ‘ವಿಶ್ವಂಭರ’ (Vishambhara) ಸಿನಿಮಾದಲ್ಲಿ ತ್ರಿಷಾ ಕೃಷ್ಣನ್ (Trisha Krishnan) ನಾಯಕಿ ಎಂದು ಹರಿದಾಡುತ್ತಿದ್ದ ಸುದ್ದಿಗೆ ಇದೀಗ ಸ್ಪಷ್ಟನೆ ಸಿಕ್ಕಿದೆ. ಈ ಚಿತ್ರದಲ್ಲಿನ ತ್ರಿಷಾ ಪಾತ್ರದ ಲುಕ್ ಅನ್ನು ಚಿತ್ರತಂಡ ಮೇ 4ರಂದು ಅನಾವರಣ ಮಾಡಿದೆ. ಇದನ್ನೂ ಓದಿ:ಅಟ್ಲಿ ಜೊತೆಗಿನ ಚಿತ್ರಕ್ಕಾಗಿ ಅಲ್ಲು ಅರ್ಜುನ್ ತಯಾರಿ ಹೇಗಿದೆ?- ಹೊರಬಿತ್ತು ಅಪ್‌ಡೇಟ್

ಇಂದು ತ್ರಿಷಾಗೆ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ಫ್ಯಾನ್ಸ್‌ಗೆ ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದೆ. ‘ವಿಶ್ವಂಭರ’ ಸಿನಿಮಾದಲ್ಲಿ ತ್ರಿಷಾ ಯಾವ ಲುಕ್‌ನಲ್ಲಿ ಕಾಣುತ್ತಾರೆ ಎಂಬುದನ್ನು ಪೋಸ್ಟರ್ ಅನ್ನು ತಂಡ ರಿವೀಲ್ ಮಾಡಿದೆ. ಅವನಿ ಎಂಬ ಪಾತ್ರದಲ್ಲಿ ನಟಿಸಿರುವ ತ್ರಿಷಾ ಚೆಂದದ ಸೀರೆಯುಟ್ಟು ಕಂಗೊಳಿಸಿದ್ದಾರೆ. ನಟಿಯ ಲುಕ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ:ಮತ್ತೆ ವಿಜಯ್ ದೇವರಕೊಂಡಗೆ ರಶ್ಮಿಕಾ ಮಂದಣ್ಣ ಜೋಡಿ?
ಈ ಚಿತ್ರದಲ್ಲಿ ಚಿರಂಜೀವಿ(Chiranjeevi), ತ್ರಿಷಾ ಜೊತೆ ಕನ್ನಡತಿ ಆಶಿಕಾ ರಂಗನಾಥ್ (Ashika Ranganath) ಕೂಡ ನಟಿಸಿದ್ದಾರೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಬಗ್ಗೆ ಚಿತ್ರತಂಡ ಅಪ್‌ಡೇಟ್ ನೀಡಲಿದೆ.