
ಪಾಕಿಸ್ತಾನದ ಕರಾಚಿಯಲ್ಲಿ ಅಡಗಿ ಕೂತಿದ್ದ ದಾವೂದ್ ಈಗ ಪಾಕ್ ನಿಂದಲೇ ಎಸ್ಕೇಪ್ ಆಗಿದ್ದಾನಂತೆ. ಭಾರತದ ನೌಕಾ ನೆಲೆಯಿಂದ ನೇರವಾಗಿ ರಾತ್ರೋರಾತ್ರಿ ಪಾಕಿಸ್ತಾನದ ಕರಾಚಿಯ ಬಂದರಿನ ಮೇಲೆ ನಮ್ಮ ಆರ್ಮಿ ಕ್ಷಿಪಣಿ ದಾಳಿ ನಡೆಸುತ್ತಿದ್ದಂತೆ ಗ್ಲೂಬಲ್ ಟೆರರಿಸ್ಟ್, ಭೂಗತ ಪಾತಕಿ ದಾವೂದ್ ಇಬ್ರಾಹಿಂ ದಿಢೀರನೇ ಕಣ್ಮರೆಯಾಗಿದ್ದಾನಂತೆ! ರಾತ್ರೋರಾತ್ರಿ ಕರಾಚಿಯ ತನ್ನ ವೈಟ್ ಹೌಸ್ ನಿಂದ ಎದ್ನೋ ಬಿದ್ನೋ ಎಂದು ಉಟ್ಟ ಬಟ್ಟೆ ಸಮೇತ ಎಸ್ಕೇಪ್ ಆಗಿದ್ದಾನೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಪ್ರಾಣ ಭಯದಿಂದ ಪಾಕಿಸ್ತಾನದ ಹಲವು ಉದ್ಯಮಿಗಳು, ಸೈನ್ಯದ ಮೇಜರ್ ಗಳು ಊರು ಬಿಟ್ಟಿದ್ದಾರಂತೆ!
ಆಪರೇಷನ್ ಸಿಂಧೂರ್ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ ನಡುವೆ ನಿರಂತರವಾಗಿ ಕ್ಷಿಪಣಿ ದಾಳಿಯಾಗುತ್ತಿದೆ. ಪಾಕಿಸ್ತಾನದ ಹೊತ್ತಿ ಉರಿಯುತ್ತಿದೆ. ಭಾರತದ ಕ್ಷಿಪಣಿಗಳು ಲಾಹೋರ್, ಇಸ್ಲಾಮಾಬಾದ್, ಸಿಯಾಲ್ ಕೋಟ್, ಕರಾಚಿ ಸೇರಿದಂತೆ ಪಾಕಿಸ್ತಾನದ ಪ್ರಮುಖ ಸ್ಥಳಗಳನ್ನು ಛಿದ್ರಗೊಳಿಸಿದೆ. ಇದರಿಂದ ಬೆದರಿದ ದಾವೂದ್ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಭಾರತದಲ್ಲಿ ಹಲವು ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಆಗಿರುವ ಪಾತಕಿ ಈಗ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ವರದಿಯಾಗುತ್ತಿದೆ. ಈತ ಮುಂಬೈ ಸರಣಿ ಬಾಂಬ್ ಬ್ಲಾಸ್ಟ್ ನಲ್ಲಿ ಭಾರತಕ್ಕೆ ಮೋಸ್ಟ್ ವಾಂಟೆಡ್ ಪಾತಕಿಯಾಗಿರುವುದಷ್ಟೇ ಅಲ್ಲದೇ ಭಾರತದಲ್ಲಿ ನಡೆಯುವ ಹಲವು ಭಯೋತ್ಪಾದಕ, ದೇಶ ದ್ರೋಹಿ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತಿದ್ದಾನೆ. ಕ್ರಿಕೆಟ್ ಬೆಟ್ಟಿಂಗ್, ಹವಾಲ, ಡ್ರಗ್ಸ್ ಮಾಫಿಯಾ ಜೊತೆಗೆ ಮುಂಬೈ ಭೂಗತ ಜಗತ್ತಿನಲ್ಲಿ ತನ್ನದೇ ಏಜೆಂಟರನ್ನಿಟ್ಟು ಹಪ್ತಾ ವಸೂಲಿ, ಕಿಡ್ನಾಪ್, ಭೂ ಕಬಳಿಕೆ ಮುಂತಾದ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾನೆ.
ಈಗ ಭಾರತೀಯ ಗುಪ್ತಚರ ಇಲಾಖೆ ಈತನನ್ನು ಕೂಡ ಉಗ್ರರ ಪಟ್ಟಿಯಲ್ಲಿಟ್ಟಿರುವುದರಿಂದ ಈತನ ಅಡಗು ತಾಣದ ಮೇಲೂ ದಾಳಿ ಆಗುವ ಭಯದಿಂದ ಈಗ ಸದ್ಯಕ್ಕೆ ಪಾಕಿಸ್ತಾನದ ಸಹವಾಸವೇ ಬೇಡ ಎಂದು ವಿದೇಶಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಪಾಕಿಸ್ತಾನದಲ್ಲಿ ಅಡಗಿಕೊಂಡಿದ್ದ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಭಾರತವೆಂದರೆ ಎಷ್ಟು ಭಯ ಎಂಬುದಕ್ಕೆ ಇದುವೇ ಸಾಕ್ಷಿಯಾಗಿದೆ.