
Namma Metro To Anekal : ಬೆಂಗಳೂರು ಮೆಟ್ರೋ ರೈಲು ಮಾರ್ಗವನ್ನು ಆನೇಕಲ್ ಭಾಗಕ್ಕೂ ವಿಸ್ತರಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಕಾರ್ಯಸಾಧ್ಯತಾ ವರದಿ ತಯಾರಾಗುತ್ತಿದ್ದು, ಜೂನ್ ವೇಳೆಗೆ ಅಧ್ಯಯನ ವರದಿ ಲಭ್ಯವಾಗಲಿದೆ. ಕಾಳೇನ ಅಗ್ರಹಾರದಿಂದ ಕಾಡುಗೋಡಿವರೆಗೆ 68 ಕಿ.ಮೀ ಮಾರ್ಗವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಭವಿಷ್ಯದಲ್ಲಿ ತುಮಕೂರು, ಹೊಸಕೋಟೆ, ಬಿಡದಿಗೂ ಮೆಟ್ರೋ ವಿಸ್ತರಣೆಯಾಗಲಿದೆ.
ಹೈಲೈಟ್ಸ್:
- ಆನೇಕಲ್ ಭಾಗದಲ್ಲಿಯೂ ಮೆಟ್ರೋ ರೈಲು ಓಡಿಸಲು ಸಿದ್ಧತೆ.
- ಜೂನ್ ವೇಳೆಗೆ ಕಾರ್ಯ ಸಾಧ್ಯತಾ ವರದಿ ಬರುತ್ತದೆ ಎಂದ ಡಿಕೆ ಸುರೇಶ್
- ಬೆಂಗಳೂರು ನಗರದ ಭಾಗವಾಗುತ್ತಿರುವ ಆನೇಕಲ್ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ಎಂದ ಡಿಕೆ ಶಿವಕುಮಾರ್.