
ವಕೀಲರಲ್ಲದವರೂ ತಮ್ಮ ಖಾಸಗಿ ಯಾ ವಾಣಿಜ್ಯ ವಾಹನಗಳಲ್ಲಿ “ವಕೀಲರ ಚಿಹ್ನೆ” ಸ್ಟಿಕ್ಕರ್ ಬಳಸುತ್ತಿರುವುದು ನಮ್ಮ ಗಮನಕ್ಕೆ ಬಂದರೆ, ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಕೆಲವೆಡೆ ವಾಹನಗಳಲ್ಲಿ ವಕೀಲರಲ್ಲದವರೂ ವಕೀಲರ ಚಿಹ್ನೆ ಬಳಸುತ್ತಿರುವ ದೂರುಗಳು ಕೇಳಿಬಂದಿದೆ. ಅಂಥವರಿಗೆ ಎಚ್ಚರಿಕೆ ನೀಡಲಾಗಿದೆ. ಇನ್ನೂ ಇಂತಹ ಘಟನೆಗಳು ಮರುಕಳಿಸಿದರೆ, ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಕೆಎಸ್ಬಿಸಿ ಮುನ್ನೆಚ್ಚರಿಕೆ ನೀಡಿದೆ.
ಇಂತಹ ಅಕ್ರಮದ ವಿರುದ್ಧ ಮಾಹಿತಿ ನೀಡುವಂತೆ ವಕೀಲರ ಪರಿಷತ್ ಸಾರ್ವಜನಿಕರಿಗೆ ಮನವಿ ಮಾಡಿದೆ. ಈ ಕುರಿತು ವಕೀಲರ ಪರಿಷತ್ತು ಅಧ್ಯಕ್ಷ ಎಸ್.ಎಸ್. ಮಿಟ್ಟಲಕೋಡ ಅವರು ಪ್ರಕಟಣೆ ಹೊರಡಿಸಿದ್ದಾರೆ.
ತಾವು ವಕೀಲರು ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದು, ಅಂತಹವರು ವಕೀಲರ ಸಮುದಾಯದ ಹೆಸರು ದುರುಪಯೋಗ ಹಾಗೂ ವಕೀಲ ವೃತ್ತಿಗೆ ಅವಮಾನ ಮಾಡುತ್ತಿದ್ದಾರೆ. ಅಂತವರ ವಿರುದ್ಧ ಸಂತ್ರಸ್ತರು ಯಾ ಸಾರ್ವಜನಿಕರು ಮಾಹಿತಿ ನೀಡುವಂತೆ ಕೋರಲಾಗಿದೆ.