ಇತ್ತೀಚಿನ ಸುದ್ದಿ

ಮೇಕಪ್ ಮಾಂತ್ರಿಕ ವಿಕ್ರಮ್ ಗಾಯಕ್​ವಾಡ್ ನಿಧನ; ಕಂಬನಿ ಮಿಡಿದ ಭಾರತೀಯ ಚಿತ್ರರಂಗ

ಮೇಕಪ್ ಮೂಲಕ ಚಿತ್ರರಂಗದಲ್ಲಿ ಮೋಡಿ ಮಾಡಿದ್ದ ಕಲಾವಿದ ವಿಕ್ರಮ್ ಗಾಯಕ್​ವಾಡ್​ ಅವರು ನಿಧನರಾಗಿದ್ದಾರೆ. ವಿಕ್ರಮ್ ಅವರ ಮೇಕಪ್​ ಸಹಾಯದಿಂದ ಹಲವಾರು ಸಿನಿಮಾಗಳು ಜನಮನ ಗೆಲ್ಲಲು ಸಾಧ್ಯವಾಗಿತ್ತು. ಅವರ ನಿಧನಕ್ಕೆ ಆಮಿರ್ ಖಾನ್, ವಿವೇಕ್ ಅಗ್ನಿಹೋತ್ರಿ, ವರುಣ್ ಧವನ್ ಮುಂತಾದವರು ಕಂಬನಿ ಮಿಡಿದಿದ್ದಾರೆ.

ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ಮೇಕಪ್ ಕಲಾವಿದ ವಿಕ್ರಮ್ ಗಾಯಕ್​ವಾಡ್ (Vikram Gaikwad) ಅವರು ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ವಿಕ್ರಮ್ ಗಾಯಕ್​ವಾಡ್ ನಿಧನಕ್ಕೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಸಂಜು, ಪಿಕೆ, ದಂಗಲ್, ರಂಗ್​ ದೆ ಬಸಂತಿ ಮುಂತಾದ ಸೂಪರ್ ಹಿಟ್ (Bollywood) ಸಿನಿಮಾಗಳಲ್ಲಿ ಅವರು ಕೆಲಸ ಮಾಡಿದ್ದರು. ಅವರ ಅಗಲಿಕೆಯಿಂದ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಆಗಿದೆ. ವಿಕ್ರಮ್ ಗಾಯಕ್​​ವಾಡ್ ನಿಧನಕ್ಕೆ (Vikram Gaikwad Death) ಆಮಿರ್ ಖಾನ್, ರಣವೀರ್ ಸಿಂಗ್, ವಿವೇಕ್ ಅಗ್ನಿಹೋತ್ರಿ ಮುಂತಾದ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ.

ವಿಕ್ರಮ್ ಗಾಯಕ್​ವಾಡ್ ನಿಧನದ ಸುದ್ದಿಯನ್ನು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ಖಚಿತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಹಲವು ವರ್ಷಗಳಿಂದ ವಿಕ್ರಮ್ ಗಾಯಕ್​ವಾಡ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಬಹುಬೇಡಿಕೆಯ ಮೇಕಪ್ ಕಲಾವಿದನಾಗಿ ಅವರು ಗುರುತಿಸಿಕೊಂಡಿದ್ದರು.

ಅತ್ಯುತ್ತಮ ಮೇಕಪ್​​ಗಾಗಿ ಅವರು ಹಲವು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು. ಕಲಾವಿದರು ನಿರ್ದಿಷ್ಟ ಪಾತ್ರದ ರೀತಿ ಕಾಣಬೇಕು ಎಂದರೆ ಮೇಕಪ್ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಬಯೋಪಿಕ್ ರೀತಿಯ ಸಿನಿಮಾಗಳಲ್ಲಿ ಮೇಕಪ್ ನಿಜಕ್ಕೂ ಸವಾಲಿನ ಕೆಲಸ ಆಗಿರುತ್ತದೆ. ಅಂಥ ಸವಾಲನ್ನು ‘ದಂಗಲ್’, ‘ಸಂಜು’ ಮುಂತಾದ ಸಿನಿಮಾಗಳಲ್ಲಿ ಸಮರ್ಥವಾಗಿ ನಿಭಾಯಿಸಿದ್ದರು ವಿಕ್ರಮ್ ಗಾಯಕ್​ವಾಡ್. ಅವರ ಕೆಲಸಕ್ಕೆ ಪ್ರೇಕ್ಷಕರು ಭೇಷ್ ಎಂದಿದ್ದರು.

Related Articles

Leave a Reply

Your email address will not be published. Required fields are marked *

Back to top button