
ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಟೆಕ್ಸ್ ಕ್ರಿಕೆಟ್ಗೆ ವಿದಾಯ ಹೇಳಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ನಾನು ಮೊದಲ ಬಾರಿಗೆ ಗುಡ್ಡೆಯ ನೀಲಿ ಜರ್ಸಿ ಧರಿಸಿ 14 ವರ್ಷಗಳಾಗಿವೆ.
ನಿಜವಾಗಿಯೂ, ಇದು ನನ್ನನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಇದು ನನ್ನನ್ನು ಪರೀಕ್ಷಿಸಿದೆ, ರೂಪಿಸಿದೆ ಮತ್ತು ಜೀವನಪೂರ್ತಿ ನೆನಪಿನಲ್ಲಿರುವ ಪಾಠಗಳನ್ನು ಕಲಿಸಿದೆ.
ನಾನು ಯಾವಾಗಲೂ ನನ್ನ ಟೆಸ್ಟ್ ವೃತ್ತಿಜೀವನವನ್ನು ಖುಷಿಯೊಂದಿಗೆ ನೆನಪಿಸಿಕೊಳ್ಳುತ್ತೇನೆ.
ಜೂನ್ 20, 2025 ರಿಂದ ಇಂಗ್ಲೆಂಡ್ನಲ್ಲಿ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲೇ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯಾಗುವ ತಮ್ಮ ಉದ್ದೇಶವನ್ನು ತಿಳಿಸಿದ್ದರು. ರೋಹಿತ್ ಶರ್ಮಾ ಮತ್ತು ರವಿಚಂದ್ರನ್ ಅಶ್ವಿನ್ರ ಇತ್ತೀಚಿನ ಟೆಸ್ಟ್ ನಿವೃತ್ತಿಯ ನಂತರ ಈ ನಿರ್ಧಾರವು ಭಾರತೀಯ ಕ್ರಿಕೆಟ್ಗೆ ಒಂದು ಮಹತ್ವದ ಬದಲಾವಣೆ ಎನ್ನಬಹುದು.
ವಿರಾಟ್ ಕೊಹ್ಲಿಯ ದಾಖಲೆಯ ಸಾಧನೆಗಳು
ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಅವರು, 68 ಪಂದ್ಯಗಳಲ್ಲಿ 40 ಗೆಲುವುಗಳೊಂದಿಗೆ ದಾಖಲೆ ಮಾಡಿದ್ದಾರೆ. ಅವರ ನಾಯಕತ್ವದಲ್ಲಿ ಭಾರತವು ಟೆಸ್ಟ್ ಕ್ರಿಕೆಟ್ನಲ್ಲಿ ಪ್ರಾಬಲ್ಯವನ್ನು ಸಾಧಿಸಿತು, ವಿಶೇಷವಾಗಿ ವಿದೇಶದಲ್ಲಿ ಸ್ಮರಣೀಯ ಗೆಲುವುಗಳನ್ನು ದಾಖಲಿಸಿತು. 123 ಟೆಸ್ಟ್ ಪಂದ್ಯಗಳಲ್ಲಿ 46.85ರ ಸರಾಸರಿಯೊಂದಿಗೆ 9,230 ರನ್ಗಳನ್ನು ಕೊಹ್ಲಿ ಗಳಿಸಿದ್ದಾರೆ, ಇದರಲ್ಲಿ 30 ಶತಕಗಳು ಸೇರಿವೆ.