
IPL 2025: ಭಾರತ-ಪಾಕಿಸ್ತಾನದ ನಡುವೆ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಉದ್ವಿಗ್ನಗೊಳ್ಳುತ್ತಿದೆ. ಈ ಹಿನ್ನೆಲೆ ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಐಪಿಎಲ್ 2025 ಟೂರ್ನಿಯ ಹಲವು ಪಂದ್ಯಗಳನ್ನು ಸ್ಥಳಾಂತರ ಮಾಡಲಾಗಿದೆ. ಒಂದು ವೇಳೆ ಇದೇ ಪರಿಸ್ಥಿತಿ ಮುಂದುವರೆದರೆ, ಈ ಬಾರಿಯ ಪಂದ್ಯಾವಳಿಯೇ ಮುಂದೂಡಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಐಪಿಎಲ್ ಮುಖ್ಯಸ್ಥ ಹೇಳಿದ್ದೇನು ಹಾಗೂ ಬಿಸಿಸಿಐ ನಿಲುವೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ವಿಶ್ವದಲ್ಲೇ ಅತ್ಯಂತ ದೊಟ್ಟ ಲೀಗ್ ಅಂದರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಗಿದೆ. ಇದೀಗ ಈ ಬಾರಿಯ ಅಂದರೆ 18ನೇ ಸೀಸನ್ ಮುಗಿಯುವ ಹಂತದಲ್ಲೇ ಟೂರ್ನಿ ರದ್ದಾಗಿ ಮುಂದೂಡಿಕೆಯಾಗುವ ಆತಂಕ ಎದುರಾಗಿದೆ. ಇದಕ್ಕೆಲ್ಲ ಪ್ರಮುಖ ಕಾರಣ ನರಿ ಬುದ್ಧಿ ಪಾಪಿ ಪಾಕಿಸ್ತಾನ. ಇದೀಗ ಭಾರತೀಯ ಸೇನೆಯು ಕೂಡ ಇನ್ನೂ ಬುದ್ಧಿ ಕಲಿಯದೇ ಪಾಪಿ ಪಾಕ್ಗೆ ತಕ್ಕ ತಿರುಗೇಟು ಕೊಡುತ್ತಲೇ ಇದೆ. ಆದರೂ ಐಪಿಎಲ್ನಲ್ಲಿ ಬರೀ ದೇಶೀಯ ಆಟಗಾರರು ಅಷ್ಟೇ ಅಲ್ಲದೆ, ವಿದೇಶಿ ಆಟಗಾರರು ಆಡುತ್ತಿದ್ದಾರೆ.
ಆದ್ದರಿಂದ ಅವರ ರಕ್ಷಣೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಟೂರ್ನಿ ಮುಂದೂಡಿಕೆ ಮಾಡುವ ಕ್ರಮವನ್ನು ತೆಗೆದುಕೊಂಡರೂ ಆಶ್ಚರ್ಯವಿಲ್ಲ. ಈಗಾಗಲೇ ಗುರುವಾರ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ಕೂಡ ತುರ್ತು ಸಭೆ ನಡೆಸಿ ಮುಂಜಾಗ್ರತಾ ಕ್ರಮವಾಗಿ ರದ್ದು ಮಾಡಲಾಗಿದೆ. ಹಾಗೆಯೇ ಇಂದು ಬಿಸಿಸಿಐ ನಡೆಸುವ ಮಹತ್ವದ ಸಭೆಯಲ್ಲಿ ಪಂದ್ಯ ಮುಂದೂಡಿಕೆ ಅಥವಾ ಪಂದ್ಯಗಳ ಸ್ಥಳಾಂತರ ಮಾಡುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇದೀಗ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿರುವ ಹಿನ್ನೆಲೆ ಸದ್ಯದ ಮಟ್ಟಿಗೆ ಎಲ್ಲಾ ವಿದೇಶಿ ಆಟಗಾರರನ್ನು ವಾಪಸ್ ಕಳುಹಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಕುರಿತು ಇಂದು ಬಿಸಿಸಿಐ ತುರ್ತು ಸಭೆ ಕರೆದಿದೆ. ಈಹಾಹಲೇ ಗುರುವಾರ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ರದ್ದಾಗಿದ್ದರಿಂದ. ಈ ಬಾರಿಯ ಟೂರ್ನಿಯೂ ರದ್ದಾಗುವ ಸಾಧ್ಯತೆಯಿದೆ.
ಈ ಬಾರಿ ಅಂದರೆ 18ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಗಿಯುವ ಹಂತವನ್ನು ತಲುಪಿದೆ. ಮೇ 25ಕ್ಕೆ ಫೈನಲ್ ಇದ್ದು, ಅಂದು ಎಲ್ಲಾ ಪಂದ್ಯಗಳು ಮುಕ್ತಾಯವಾಗಲಿದ್ದವು. ಆದರೆ, ಇದೀಗ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಎಲ್ಲಾರ ಸುರಕ್ಷತೆ ದೃಷ್ಟಿಯಿಂದ ಐಪಿಎಲ್ ಮುಂದೂಡಿಕೆ ಬಗ್ಗೆ ಬಿಸಿಸಿಐ ಇಂದು ಮಹತ್ವದ ಸಭೆ ನಡೆಸಲಿದೆ. ಏನು ನಿರ್ಧಾರ ಹೊರಹಾಕುತ್ತದೆಯೋ ಎಂದು ಕಾದುನೋಡಬೇಕಿದೆ.