ಇತ್ತೀಚಿನ ಸುದ್ದಿವಿಶ್ವ

ಭಾರತಕ್ಕೆ ನಾವಿರುವ ಸ್ಥಳ ಗೊತ್ತಾಗುತ್ತದೆ, ಅದಕ್ಕೆ ಅವರ ಡ್ರೋನ್​​ಗಳನ್ನು ತಡೆಯುತ್ತಿಲ್ಲ

ಪಹಲ್ಗಾಮ್ (pahalgam) ನಲ್ಲಿ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ್ (operation sindoor) ಮೂಲಕ ಉಗ್ರರ ಅಡಗುದಾಣಗಳನ್ನು ಉಡೀಸ್ ಮಾಡಿ ಪ್ರತೀಕಾರ ತೀರಿಸಿತ್ತು. ಈ ಹಿನ್ನಲೆಯಲ್ಲಿ ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸಲು ಮುಂದಾಗಿತ್ತು. ಇದನ್ನು ಭಾರತೀಯ ಪಡೆಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದು, ಇತ್ತ ಭಾರತೀಯ ಸೇನೆಯೂ ಇಸ್ಲಮಾಬಾದ್ ನಲ್ಲಿ ನಡೆಸಿದ ಭೀಕರ ದಾಳಿಗೆ ತತ್ತರಿಸಿದ ಪಾಕಿಸ್ತಾನ ಪರಿಸ್ಥಿತಿ ಹೇಳ ತೀರಾದಾಗಿದೆ. ಭಾರತ ನಿರಂತರವಾಗಿ ದಾಳಿ ಮಾಡುತ್ತಿದ್ದರೆ ಇತ್ತ ದೇಶ ರಕ್ಷಿಸುವ ಬದಲು ಪಾಕ್ ರಕ್ಷಣಾ ಸಚಿವ ಖವಾಜಾ ಅಸಿಫ್ (pakistan defense minister khawaja asif) ಹೇಳಿಕೆ ನೀಡಿದ್ದು ಇದು ತಮಾಷೆಗೆ ಕಾರಣವಾಗಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ನಾವಿರುವ ಸ್ಥಳಗಳು ಬಹಿರಂಗಗೊಳ್ಳುತ್ತದೆ ಎನ್ನುವುದಕ್ಕೆ ನಾವು ಭಾರತದ ಡ್ರೋನ್ ಗಳನ್ನು ತಡೆಯುತ್ತಿಲ್ಲ ಎಂದಿದ್ದು ನೆಟ್ಟಿಗರು ಈ ಪಾಕ್ ರಕ್ಷಣಾ ಸಚಿವರ ಕಾಲೆಳೆದಿದ್ದಾರೆ.

Megh updates ಹೆಸರಿನ ಖಾತೆಯಲ್ಲಿ ಈ ವಿಡಿಯೋದಲ್ಲಿ ಪಾಕ್ ರಕ್ಷಣಾ ಸಚಿವ ಖವಾಜಾ ಅಸಿಫ್ ಅವರು ನಾವಿರುವ ಸ್ಥಳಗಳು ಬಹಿರಂಗಗೊಳ್ಳುತ್ತದೆ ಎನ್ನುವುದಕ್ಕೆ ನಾವು ಭಾರತದ ಡ್ರೋನ್ ಗಳನ್ನು ತಡೆಯುತ್ತಿಲ್ಲ ಎಂದು ಹೇಳಿರುವುದನ್ನು ನೋಡಬಹುದು. ಆದರೆ ಈ ವಿಡಿಯೋವನ್ನು ಶೇರ್ ಮಾಡಿಕೊಂದಿದ್ದು ಈ ದಿನದ ಅತ್ಯಂತ ಹಾಸ್ಯದಾಯಕ ವಿಷಯ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಈ ವಿಡಿಯೋ ಈಗಾಗಲೇ ಮೂವತ್ತನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಬಳಕೆದಾರರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ‘ಇದು ಒಂದು ತಂತ್ರದಂತೆ ಕಾಣಿಸುತ್ತದೆ, ಈ ಪಾಕ್ ಜನರು ನಿಜಕ್ಕೂ ಬುದ್ಧಿವಂತರು’ ಎಂದಿದ್ದಾರೆ. ಇನ್ನೊಬ್ಬರು, ‘ಪಾಕ್ ರಕ್ಷಣಾ ಸಚಿವರು ಯಾಕಿಷ್ಟು ಮೂರ್ಖರು’ ಎಂದು ಕೇಳಿದ್ದಾರೆ. ಮತ್ತೊಬ್ಬರು, ‘ಅವರು ಈ ರೀತಿ ಹೇಳಿಕೆಗಳನ್ನು ಆಗಾಗ ನೀಡುತ್ತಾರೆ. ಇನ್ನು ಸ್ವಲ್ಪ ಸಮಯದಲ್ಲೇ ಅವರು ಸಾಮಾಜಿಕ ಮಾಧ್ಯಮದಲ್ಲಿ ಅವರು ಕ್ಷಿಪಣಿಗಳನ್ನು ತಡೆಹಿಡಿದರು ಎಂದು ಹೇಳಲಿದ್ದಾರೆ’ ಎಂದು ವ್ಯಂಗ್ಯ ವಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button