ಇತ್ತೀಚಿನ ಸುದ್ದಿಟೆಕ್

ಅಮೆರಿಕಕ್ಕೆ ಭಾರತದಿಂದ 5 ವಿಮಾನ ಭರ್ತಿ ಐಫೋನ್‌ ಕಳುಹಿಸಿದ ಆಪಲ್‌

ನವದೆಹಲಿ: ಡೊನಾಲ್ಡ್‌ ಟ್ರಂಪ್‌ (Donald Trump) ವಿಧಿಸಿದ ತೆರಿಗೆ ಸುಂಕದಿಂದ ಪಾರಾಗಲು ಆಪಲ್‌ (Apple) ಕಂಪನಿ ಭಾರತದಿಂದ 5 ವಿಮಾನದಷ್ಟು ಐಫೋನ್‌ (iPhone) ಮತ್ತು ಇತರ ಉತ್ಪನ್ನಗಳನ್ನು ಅಮೆರಿಕಕ್ಕೆ (USA) ರಫ್ತು ಮಾಡಿದೆ.

ಟ್ರಂಪ್‌ ತೆರಿಗೆ ಸಮರ ಆರಂಭಿಸಿದ್ದು ವಿದೇಶದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲಿದ್ದ ಸುಂಕವನ್ನು ಹೆಚ್ಚಿಸಿದ್ದಾರೆ. ಇದರಿಂದಾಗಿ ಅಮೆರಿಕದಲ್ಲಿ ವಿದೇಶದಿಂದ ಆಮದಾಗುವ ವಸ್ತುಗಳ ಬೆಲೆ ಏರಿಕೆಯಾಗಲಿದೆ.

ವಸ್ತುಗಳ ಬೆಲೆ ಏರಿಕೆಯಿಂದ ಪಾರಾಗಲು ಆಪಲ್‌ ಕಂಪನಿ ಭಾರೀ ಪ್ರಮಾಣದಲ್ಲಿ ಐಫೋನ್‌ ಮತ್ತು ಇತರ ವಸ್ತುಗಳನ್ನು ಭಾರತದಿಂದ ರಫ್ತು ಮಾಡಿದೆ ಎಂದು ವರದಿಯಾಗಿದೆ.

– Advertisement3
Tata Group Apple iPhone 1

ಭಾರತದ ಮೇಲೆ ಟ್ರಂಪ್‌ 26% ಚೀನಾದ ಮೇಲೆ 52%, ತೈವಾನ್‌ ಮೇಲೆ 32%, ವಿಯೆಟ್ನಾಂ ಮೇಲೆ 46% ತೆರಿಗೆ ವಿಧಿಸಿದ್ದಾರೆ. ಐಫೋನ್‌ ಅಮೆರಿಕ ಕಂಪನಿಯಾದರೂ ಬಹುತೇಕ ಐಫೋನ್‌ಗಳು, ಅದರ ಬಿಡಿಭಾಗಗಳು ಭಾರತ, ವಿಯೆಟ್ನಾಂ, ತೈವಾನ್‌, ಚೀನಾದಲ್ಲಿ ತಯಾರಾಗುತ್ತವೆ. ಹೀಗಾಗಿ ಈ ದೇಶಗಳಿಂದ ರಫ್ತಾಗುವ ಐಫೋನ್‌ಗಳೂ ದುಬಾರಿ ಆಗಲಿವೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದ ಮೇಲೆ ವಿಧಿಸಿದ ಸುಂಕ ಕಡಿಮೆಯಿದೆ

ಮಾರ್ಚ್ ಕೊನೆಯ ವಾರದಲ್ಲಿ ಆಪಲ್‌ ಐಫೋನ್‌ಗಳನ್ನು ರಫ್ತು ಮಾಡಿದೆ. ಏಪ್ರಿಲ್ 5 ರಿಂದ ಜಾರಿಗೆ ಬಂದ ಟ್ರಂಪ್ ಆಡಳಿತವು ವಿಧಿಸಿದ 10% ಪ್ರತಿ ತೆರಿಗೆ ಮೊದಲು ರಫ್ತಾಗಿದೆ.

donald trump 2

ಚೀನಾದ ಸರಕುಗಳ ಮೇಲೆ 54% ತೆರಿಗೆ ವಿಧಿಸಿದರೆ ಭಾರತದ ವಸ್ತುಗಳ ಮೇಲೆ 26% ತೆರಿಗೆ ವಿಧಿಸಲಾಗುತ್ತಿದೆ. ಈ ನಿರ್ಧಾರದಿಂದ ಭಾರತವು ಆಪಲ್‌ನ ದೊಡ್ಡ ಜಾಗತಿಕ ಉತ್ಪಾದನಾ ನೆಲೆಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಅಂದಾಜು ಅಮೆರಿಕಕ್ಕೆ 9 ಶತಕೋಟಿ ಡಾಲರ್‌ ಮೌಲ್ಯದ ಐಫೋನ್‌ಗಳನ್ನು ಭಾರತ ರಫ್ತು ಮಾಡುತ್ತಿದೆ.

ಮುಂಬೈನಿಂದ ಅಮೆರಿಕಕ್ಕೆ ರತ್ನಗಳು ಮತ್ತು ಆಭರಣಗಳ ರಫ್ತು ಏಪ್ರಿಲ್ 1 ಮತ್ತು 4 ರ ನಡುವೆ ಆರು ಪಟ್ಟು ಹೆಚ್ಚಾಗಿ 344 ಮಿಲಿಯನ್‌ ಡಾಲರ್‌ಗೆ ಏರಿಕೆಯಾಗಿದೆ. ಒಂದು ವರ್ಷದ ಹಿಂದೆ ರಫ್ತು 61 ಮಿಲಿಯನ್ ಡಾಲರ್‌ ಆಗಿತ್ತು. 

Related Articles

Leave a Reply

Your email address will not be published. Required fields are marked *

Back to top button